ಕಾರಣ
ತಡೆದಷ್ಟು ಚಿಮ್ಮುವುದು ಕಣ್ಣಂಚಿನ ನೀರು;
ಆಳ ಎಷ್ಟೆಂದು ತಿಳಿಯದಂತಾ ಈ ನೋವು;
ಯಾವ್ಯಾವುದು ಕಾರಣ? ಯಾರ್ಯಾರು ಕಾರಣ?
ಹುಡುಕುತ್ತಾ ಹೋದಷ್ಟು ತಿರುವುದೆಷ್ಟೋ ಪುಟಗಳು;
ಉತ್ತರ ಸಿಗದ ಅದೆಷ್ಟೋ ನಿದ್ರಿಸದ ರಾತ್ರಿಗಳು;
ಹಠ ಬಿಡದಾ ಯೋಚನೆಗಳು;
ಕೊನೆಗೊಮ್ಮೆ ಸಿಗುವ ಭಯಾನಕ ಉತ್ತರ;
ಆದರೂ ನಿರಾಳವೆನಿಸುವ ಉತ್ತರ;
ನನಗೆ ನಾನೇ ಶತ್ರು!!
ಸಾಧನೆಗೂ ಬಾಧನೆಗೂ ಒಂದೇ ಕಾರಣ;
ಈ ಮನಸ್ಸು; ಈ ಚಿಂತನೆ;
ಈ ಹೊಸತು; ಈ ಕಾಲದ ಕಡಿವಾಣ;
ಈ ಸಂದರ್ಭ ;ಈ ಸಂಬಂಧ;
ಈ ಪ್ರೀತಿ; ಈ ಮಹತ್ವಾಕಾಂಕ್ಷೆ;
ಈ ಜ್ಞಾನದಾಹ; ಈ ಆತ್ಮಗೌರವ;
ಈ ವಿಮರ್ಶೆ; ಮತ್ತೆ ಈ ಹಾಯೆನಿಸುವ ಸ್ವಾತಂತ್ರ;
The reason
Translation
Stopping doesn't stop tears from rolling;
Beyond estimation is the depth of the pain;
How many people can I make it a reason?
How many issues can I make it a reason?
If I search, pages turn indefinitely;
And leads to countless sleepless nights;
But thoughts never give up;
To find for once, a terrifying answer;
Yet relieving is the answer;
I am the enemy of myself!!
To achieve or to be depressed;
There is the same reason;
This mind; these thoughts;
This newness; this chain of time;
This situation; this relation;
This love; This ambition;
This craving for knowledge;
This self-respect;
This analysis;
And finally the soothing feeling of freedom!!