"Great spirits have always encountered violent opposition from mediocre minds" - Albert Einstein
Sunday, May 12, 2013
This poem is dedicated to my husband Sandeep
It is written on 12/01/2012
-----------------------------------------------------------
ನಿನಗಾಗಿ
-------------
ನನ್ನ ಪ್ರತಿ ಉಸಿರಲ್ಲೂ ನಿನ್ನ ಛಾಯೆ,
ನಾಡಿ - ನುಡಿಯಲು ನಿನ್ನ ಮಾಯೆ |
ಪ್ರೀತಿಯೋ ಪ್ರೇಮವೋ ಕಾಣದೀ ಅನುಭವ,
ಹೆಜ್ಜೆ ಹೆಜ್ಜೆಯಲು ಸಂಭ್ರಮದ ಕಲರವ ||
ನೋವಿನಾ ಸೊಂಕಿಲ್ಲ ಕಣ್ಣಲ್ಲಿ ನೀರಿಲ್ಲ,
ನೀ ಜೊತೆ ಇರಲು ನಾ ನಾನಲ್ಲ |
ನಿನ್ನಲ್ಲೇ ಬೆಸೆದಂಥಿದೆ ನನ್ನೆಲ್ಲ ಎಳೆ ಎಳೆ,
ಶಿಶಿರ ಋತುವಿನಲು ಮನದಿ ಜಡಿ ಮಳೆ ||
ನಿನ್ನೆ ನಾಳೆಯ ಪರಿವೆ ಇಲ್ಲದೆ ನಿನಗಾಗಿ,
ನನ್ನ ಸರ್ವಸ್ವವನೇ ಬರೆದಿರುವೆ |
ತಪ್ಪು ಒಪ್ಪಿನಲು ಸ್ವೀಕರಿಸು ನನ್ನನು,
ನಿನ್ನ ಬಿಟ್ಟೆಲ್ಲವನು ನಾ ಮರೆತಿರುವೆ ||
---- ಎಲ್ . ಎಸ್. ಅನೂಷಾ ----
Subscribe to:
Post Comments (Atom)
No comments:
Post a Comment